ವುಲ್ಫ್, ವರ್ಜೀನಿಯ
	1882-1941. ಪ್ರಮುಖ ಬ್ರಿಟಿಷ್ ಕಾದಂಬರಿ ಕಾರ್ತಿ, ವಿಮರ್ಶಕಿ, ಪ್ರಬಂಧಕಾರ್ತಿ. ಸಾಹಿತ್ಯ ಚಳವಳಿಯ ನವ್ಯಯುಗದ (ಮಾಡ್ರನಿಸಂ) ಮುಂದಾಳು. ಲಂಡನ್ನಿನಲ್ಲಿ 1882ರಲ್ಲಿ ಜನಿಸಿದಳು. ತಂದೆ ಪ್ರಸಿದ್ಧ ವಿಮರ್ಶಕ ಲೆಸ್ಲಿ ಸ್ಟೀ¥sóÀನ್. ಪ್ರಸಿದ್ಧ ಸಂಪಾದಕ ಹಾಗೂ ಲೇಖಕ ಲಿಯೋನಾರ್ಡ್ ಸಿಡ್ನಿ ಈಕೆಯ ಪತಿ. ಬ್ಲೂಮ್ಸ್‍ಬರಿ ಮನೆತನಕ್ಕೆ ಸೇರಿದವಳು. ಹೊಗರ್ತ್ ಪ್ರೆಸ್‍ನ ಸಂಸ್ಥಾಪಕಿ. ಹೆಸರಾಂತ ಬರೆಹಗಾರರ ಕೃತಿಗಳು ಈ ಮುದ್ರಣಾಲಯದಲ್ಲಿ ಅಚ್ಚಾಗಿ ಪ್ರಕಟವಾಗುತ್ತಿದ್ದುವು. ಸ್ಟ್ರೀಮ್ ಆ¥sóï ಕಾನ್ಷಿಯಸ್‍ನೆಸ್ (ಪ್ರಜ್ಞಾಪ್ರವಾಹ ತಂತ್ರ) ಎಂಬ ಹೊಸ ಸಾಹಿತ್ಯಕ ತಂತ್ರವನ್ನು ಹುಟ್ಟು ಹಾಕಿ ತನ್ನದೇ ಕೃತಿಗಳಲ್ಲಿ ಅದರ ಪರಿಣಾಮವನ್ನು ಪ್ರಾಯೋಗಿಕವಾಗಿ ತೋರಿಸಿಕೊಡುವ ಮೂಲಕ ಕಾದಂಬರಿ ಬರೆವಣಿಗೆಗೆ ಒಂದು ಹೊಸ ದಿಕ್ಕನ್ನೇ ಮೂಡಿಸಿದ್ದಾಳೆ.

	ಇವಳ ಬರೆವಣಿಗೆಗಳ ಮುಖ್ಯ ಕೇಂದ್ರ ಮಹಿಳೆ. ರಾಜಕೀಯ ಬೇಡಿಕೆಗಳನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ಮುಂದಿ ಡುತ್ತಾಳೆ. ತಾಯಿ ಯರಿಗೆ ವೇತನ, ವಿವಾಹ ವಿಚ್ಛೇದನ ಕಾಯ್ದೆಯ ಸುಧಾರಣೆ, ವಿದ್ಯಾಭ್ಯಾಸ ಹಾಗೂ ಉದ್ಯೋಗಗಳಲ್ಲಿ ಮಹಿಳೆ ಯರ ಆಯ್ಕೆಯ ಹಕ್ಕು, ಮಹಿಳೆಯರಿಗೆ ಕನಿಷ್ಠ ಕೂಲಿ ಮತ್ತು ಪಿಂಚಣಿ-ಇವು ಇವಳ ವಿಚಾರಗಳ ಪ್ರಮುಖ ನೆಲೆಗಳು.

	ಸಮಾಜದಲ್ಲಿ ಲಿಂಗಭೇದ  ಸಾಂಸ್ಕøತಿಕವಾಗಿ ರೂಪುಗೊಂಡಿರುವ ಅಂಶವಾಗಿರುವುದರಿಂದ ಇದನ್ನು ಪ್ರಶ್ನಿಸಬಹುದು ಹಾಗೂ ಬದಲಾಯಿಸ ಬಹುದು ಎಂಬ ವಿಚಾರ ಸ್ತ್ರೀವಾದಕ್ಕೆ ಈಕೆಯ ಗಮನಾರ್ಹ ಕೊಡುಗೆ ಯಾಗಿದೆ. ಆಂಗ್ಲ ಭಾಷೆಯಲ್ಲಿ ಮಹಿಳಾ ಸಾಹಿತ್ಯ ಪರಂಪರೆಯನ್ನು ಗುರುತಿಸಿದ್ದು ಈಕೆಯ ಪ್ರಮುಖ ಸಾಧನೆ. ಮಹಿಳೆಯರ ಸಾಮಾಜಿಕ ಸ್ಥಿತಿಗಳು ಅವರ ಬರೆವಣಿಗೆಯ ಮೇಲೆ ಉಂಟು ಮಾಡುವ ಪ್ರಭಾವಗಳನ್ನು ಈಕೆ ಎತ್ತಿ ಹಿಡಿಯುತ್ತಾಳೆ.

	ದ ವಾಯೇಜ್ ಔಟ್ (1915) ಈಕೆಯ ಮೊದಲ ಕಾದಂಬರಿ. ಮಂಡೆ ಆರ್ ಟ್ಯೂಸ್ಡೆ (1921), ಜಾಕಬ್ಸ್ ರೂಮ್ (1922), ಮಿಸ್ಟರ್ ಡಲೋವೇ (1925), ಟು ದ ಲೈಟ್ ಹೌಸ್ (1927), ದ ವೇವ್ಸ್ (1931), ಬಿಟ್‍ವೀನ್ ದ ಆ್ಯಕ್ಟ್ಸ್ (1941) ಮೊದಲಾದ ಕಥೆ, ಕಾದಂಬರಿಗಳು;  ಎ ರೂಮ್ ಆ¥sóï ಒನ್ಸ್‍ವೋನ್ (1929), ತ್ರೀ ಜೀನಿಯಸ್ (1938), ದ ಕಾಮನ್ ರೀಡರ್ (1925), ವುಮೆನ್ ಅಂಡ್ ರೈಟಿಂಗ್ (1979) ಮೊದಲಾದವು ವಿಮರ್ಶನ ಕೃತಿಗಳು; ಆರ್‍ಲ್ಯಾನ್ಡೊ (1928), ಫ್ಲಷ್ (1933) ಇವು ಜೀವನ ಚರಿತ್ರೆಗಳಾಗಿವೆ. ರೋಜರ್ ಫ್ರೈ (1940) ಕೃತಿಯಲ್ಲಿ ಸ್ವಂತ ಬದುಕಿನ ವಿವರಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. 

	ಲೇಖಕಿಯರಿಗೆ ಒಂದು ಭದ್ರವಾದ ತಾತ್ತ್ವಿಕ ನೆಲೆಗಟ್ಟನ್ನು ಒದಗಿಸಿ ಅನುಭವದೊಂದಿಗೆ ಅಂತರಂಗೀಕರಣವೂ ಬರೆವಣಿಗೆಗೆ ಅತಿ ಮುಖ್ಯ ಎಂಬ ವಿಚಾರವನ್ನು ತನ್ನ ಕೃತಿಗಳಲ್ಲಿ ಪ್ರಾಯೋಗಿಕವಾಗಿ ಸಾಬೀತು ಪಡಿಸಿರುವುದು ಈಕೆಯ ವಿಶೇಷ. ಇವಳು 1941ರಲ್ಲಿ ನಿಧನಳಾದಳು.										
	*
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ